ಅಸ್ಸಾಂ ಟ್ರಿಬ್ಯೂನ್ ೧೯೩೮ ರಲ್ಲಿ ಪ್ರಾರಂಭವಾದ ಅಸ್ಸಾಂ ಪ್ರಾಂತ್ಯದ ಪ್ರಮುಖ ದೈನಂದಿನ ಇಂಗ್ಲೀಷ್ ಪತ್ರಿಕೆ. ಅಸ್ಸಾಂ ಟ್ರಿಬ್ಯೂನ್ ಗೌಹಾತಿ ಮತ್ತು ದಿಬ್ರುಘಢ್, ಅಸ್ಸಾಂನಿಂದ ಪ್ರಕಟವಾದ ಇಂಗ್ಲೀಷ್ ದಿನಪತ್ರಿಕೆಯಾಗಿದೆ. ಸ್ವತಂತ್ರ ನೀತಿಯನ್ನು ಪರಿಪಾಲಿಸಿಕೊಂಡು ಬರುತ್ತಿರುವ ಈ ಜನಪ್ರಿಯ ಪತ್ರಿಕೆಯ ಅಂಗವಾಗಿ ೧೯೫೫ ರಲ್ಲಿ ಅಸ್ಸಾಂ ಬಾಣಿ ಎಂಬ ಅಸ್ಸಾಮೀ ಭಾಷೆಯ ದಿನಪತ್ರಿಕೆ ಸ್ಥಾಪಿತವಾಗಿದೆ. ಮೊದಲ ಗೌಹಾತಿಯಲ್ಲಿ ಪ್ರಕಟವಾಗುತ್ತಿತ್ತು, ಈಗ ಗೌಹಾತಿ ಮತ್ತು ದಿಬ್ರುಘಢದಲ್ಲಿ ಏಕಕಾಲಕ್ಕೆ ಪ್ರಕಟಗೊಳ್ಳುತ್ತಿದೆ. ಪತ್ರಿಕೆ ಬಹುಶಃ ಈಶಾನ್ಯ ಪ್ರದೇಶಗಳಲ್ಲಿ ಉತ್ತಮ. ಅಸ್ಸಾಂನ ಭಾರಿ ಓದುಗರ ಮತ್ತು ಈಶಾನ್ಯ ಭಾರತದ ಅತ್ಯಂತ ಜನಪ್ರಿಯ ದಿನಪತ್ರಿಕೆಯಾಗಿದೆ. ಖಚಿತವಾದ ಸುದ್ದಿಗಳಿಗೆ, ಪ್ರಾಮಾಣಿಕತೆಗೆ ಮತ್ತು ವಿಶೇಷ ಲೇಖನಗಳಿಗೆ ಹೆಸರಾದ ಇದರ ಪ್ರಗತಿಗೆ ಕಾರಣರಾದವರು, ಸಂಪಾದಕ ಎಲ್. ಎಸ್. ಫೂಕನ್. ಈಗಿನ ಸಂಪಾದಕ ಪಿ ಜಿ ಬರುವಾ. (ಎನ್.ಕೆ.) == ಉಲ್ಲೇಖಗಳು ==